ವಿಮೋರ್‌  ಹ್ಯಾಂಡ್‌ಲೂಮ್‌  ವತಿಯಿಂದ  5 ದಿನ ಕೈಮಗ್ಗ ಉಡುಪುಗಳ ಪ್ರದರ್ಶನ..

ಬೆಂಗಳೂರು 04/11/2019:-

ವಿಮೋರ್‌ ಹ್ಯಾಂಡ್‌ಲೂಮ್ ಫೌಂಡೇಷನ್‌‌ನ 45 ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್‌ 8 ರಿಂದ 12 ರವರೆಗೆ ಬೆಂಗಳೂರು

ಅಂತಾರಾಷ್ಟ್ರೀಯ ಕೇಂದ್ರ, ದೊಮ್ಮಲೂರಿನಲ್ಲಿ ಕೈಮಗ್ಗಉಡುಪುಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ.
“ಹ್ಯಾಂಡ್‌ಲೂಮ್‌ ವಾಯೇಜ್‌” ಶೀರ್ಷಿಕೆಯಡಿ ಆಯೋಜಿಸಿರುವ 5 ದಿನದ ಪ್ರದರ್ಶನದಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳು ಜರುಗಲಿವೆ. ಕೈಮಗ್ಗದಲ್ಲಿ ರೂಪುಗೊಳ್ಳುವ ಉಡುಪುಗಳ ಪ್ರದರ್ಶನ, ಅದಕ್ಕೆ ಬಳಸುವ ನೇಯ್ಗೆ, ದಾರಗಳು, ಕಚ್ಚಾ ಬಟ್ಟೆ, ವಿನ್ಯಾಸ ಸೇರಿದಂತೆ ಕೈಮಗ್ಗದ ಸಂಪೂರ್ಣ ಮಾಹಿತಿಯನ್ನು ಸಹ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.
ವಿಮೋರ್‌ ಹ್ಯಾಂಡ್‌ಲೂಮ್‌ ಫೌಂಡೇಷನ್‌ ಈ ಕಾರ್ಯಕ್ರಮವನ್ನು ಕೈಮಗ್ಗ ಉದ್ಯಮಕ್ಕೆ ಸಮರ್ಪಿಸುತ್ತಿದೆ.ಕೈಮಗ್ಗ ಉದ್ಯಮ ನಡೆದು ಬಂದ ಹಾದಿ, ಇದಕ್ಕೆ ಸಮುದಾಯಗಳ ಕೊಡುಗೆ ಬಗ್ಗೆಯೂ ಜಾಗೃತಿ ಮೂಡಿಸುವ ವಿಚಾರ ಸಂಕಿರಣದಂಥ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೇಕಾರ ತಜ್ಞರಾದ ಡಾ. ಜಯರಾಜ್ ಹಾಗೂ ಶ್ರೀ ಸಿ. ಶೇಖರ್ ಅವರು ನೇಕಾರರೊಂದಿಗೆ ಸಂವಾದ ನಡೆಸಲಿದ್ದಾರೆ.
ಈ ಕಾರ್ಯಕ್ರಮವು ಕೈಮಗ್ಗ ಸಮುದಾಯಗಳ ಪುನರುಜ್ಜೀವನ, ನವೀಕರಣ, ನಾವೀನ್ಯತೆ ಮತ್ತು ಸಬಲೀಕರಣದ ಪ್ರಯಾಣದ ಬಗ್ಗೆ ಒಳನೋಟವನ್ನು ಒದಗಿಸುತ್ತದೆ ಮತ್ತು ಉದ್ಯಮಕ್ಕೆ ಕೊಡುಗೆನೀಡಿರುವವರ ಬಗ್ಗೆಯೂ ಬೆಳಕು ಚೆಲ್ಲಲಾಗುತ್ತದೆ. ಕೈಮಗ್ಗ ಉದ್ಯಮ ಶತಮಾನಗಳಿಂದ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಸಹಿಯಾಗಿ ನಿಂತು, ಅದರ ವೈವಿಧ್ಯತೆಯನ್ನು ಮತ್ತು ಆ ಮೂಲಕ ಅದರ ಶ್ರೀಮಂತಿಕೆಯನ್ನು ಬಿಂಬಿಸುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಕೈಮಗ್ಗ ಉದ್ಯಮ ಮತ್ತು ಕುಶಲಕರ್ಮಿಗಳ ಸಮೂಹಗಳು ಶೀಘ್ರವಾಗಿ ಕ್ಷೀಣಿಸುತ್ತಿವೆ. ದೊಡ್ಡ ಕೈಗಾರಿಕೆಗಳು ಮತ್ತು ಆಧುನಿಕ ಪವರ್‌ಲೂಮ್‌ಗಳೊಂದಿಗೆಸ್ಪರ್ಧಿಸುತ್ತಿರುವ ಸಾಂಪ್ರದಾಯಿಕ ನೇಕಾರರಿಗೆ ಕನಿಷ್ಠ ಮಾರ್ಗದರ್ಶನ ಮತ್ತು ಕೈಮಗ್ಗಗಳನ್ನು ಬಲಪಡಿಸುವ ಮತ್ತು ಕುಶಲಕರ್ಮಿಗಳನ್ನು ಸಶಕ್ತಗೊಳಿಸುವ ಪ್ರಯತ್ನಗಳು ಕಡಿಮೆಯಾಗುತ್ತಿವೆ. ಈಉದ್ಯಮದ ಸ್ಥಿತಿಯನ್ನು ಕ್ರಮೇಣ ಸುಧಾರಿಸುವ ನಿಟ್ಟಿನಲ್ಲಿ ಬೆರಳೆಣಿಕೆಯಷ್ಟು ಜನರು ಕೆಲಸ ಮಾಡುತ್ತಿರುವುದರಿಂದ, ಕೈಮಗ್ಗಗಳನ್ನು ಪೋಷಿಸುವ ಕೆಲಸವಾಗಬೇಕಿದೆ.
ವಿಮೋರ್‌ ತನ್ನ 45 ವರ್ಷಗಳಲ್ಲಿ ಕುಶಲಕರ್ಮಿಗಳ ಜೀವನೋಪಾಯವನ್ನು ಸಬಲೀಕರಣಗೊಳಿಸಲು ನೆರವಾಗಿದೆ. ಹ್ಯಾಂಡ್‌ಲೂಮ್‌ ಮಷಿನ್‌ ಬಳಸದೇ ನೇಕಾರರಿಂದಲೇ ನೇಯುವ ಕೆಲಸವನ್ನುಮಾಡುತ್ತಾ ಬಂದಿದೆ. ಈ ಐದು ದಿನದ ಕಾರ್ಯಕ್ರಮದಲ್ಲಿ ಭಾರತದಲ್ಲಿ ಕೈಮಗ್ಗಗಳ ಪೋಷಣೆಯನ್ನು ಉತ್ತೇಜಿಸುವ ಒಂದು ಆಂದೋಲನವನ್ನು ತರಲು ನೇಕಾರರು, ವಿನ್ಯಾಸಕರು, ಉದ್ಯಮಿಗಳು ಮತ್ತು ಅಭಿಜ್ಞರು ಸಂವಹನನಡೆಸುತ್ತಾರೆ ”ಎಂದು ವಿಮೋರ್ ಕೈಮಗ್ಗ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಪವಿತ್ರಾ ಮುದ್ದಯ್ಯ ಹೇಳುತ್ತಾರೆ. ——

ಕಾರ್ಯಕ್ರಮದ ವಿವರ; ಐದು ದಿನಗಳ ಕಾರ್ಯಕ್ರಮದಲ್ಲಿ ಕೈಮಗ್ಗ, ಜವಳಿ ಮತ್ತು ನೇಯ್ಗೆಯ ಐತಿಹಾಸಿಕ ವಿಕಾಸದ ಕುರಿತು ಕಾರ್ಯಾಗಾರ, ಸಂವಾದ, ವಿಚಾರಸಂಕಿರಣ ಏರ್ಪಡಿಸಲಾಗಿದೆ. ಜೊತೆಗೆ ಮಕ್ಕಳಿಂದ ಕೈಮಗ್ಗಕುರಿತು ಕಥೆ ಹೇಳುವ ಕಾರ್ಯಕ್ರಮವೂ ಇರಲಿದೆ. ಹೆಸರಾಂತ ವಿನ್ಯಾಸಕಾರ ಪ್ರಸಾದ್ ಬಿದಪ್ಪ ಅವರಿಂದ ಫ್ಯಾಶನ್ ಶೋ ಪ್ರಸ್ತುತಪಡಿಸುತ್ತದೆ.

ವಿಮೋರ್ ಕೈಮಗ್ಗ ಪ್ರತಿಷ್ಠಾನದ ಬಗ್ಗೆ: 1974ರಲ್ಲಿ ಚಿಮ್ಮಿ ನಂಜಪ್ಪ ಮತ್ತು ಪವಿತ್ರಾ ಮುದ್ದಯ್ಯರಿಂದ ಸ್ಥಾಪಿಸಲ್ಪಟ್ಟ ವಿಮೋರ್ ಸಂಸ್ಥೆಯು, ಕೈಮಗ್ಗ ಮತ್ತು ನೇಯ್ಗೆಯ ಸಂಶೋಧನೆ, ಸಂರಕ್ಷಣೆ ಮತ್ತು ವಿನ್ಯಾಸದಲ್ಲಿ ತೊಡಗಿಸಿಕೊಂಡಿದೆ. ಚಾರಿಟಬಲ್ ಫೌಂಡೇಶನ್ ಆಗಿ, ವಿಮೋರ್ ನೇಕಾರರ ಜೊತೆ ನಿಕಟ ಸಂಪರ್ಕ ಹೊಂದಿದೆ. ವಿಮೋರ್ ಕೈಮಗ್ಗ ಫೌಂಡೇಶನ್ ಇತ್ತೀಚೆಗೆ ಮ್ಯೂಸಿಯಂ ಆಫ್ ಲಿವಿಂಗ್ ಟೆಕ್ಸ್‌ಟೈಲ್ಸ್‌ ಪ್ರಾರಂಭಿಸಿದೆ.ಪ್ರಾಚೀನ, ಮರೆತುಹೋದ ನೇಯ್ಗೆಗಳನ್ನು ಪ್ರದರ್ಶಿಸುವ ಮತ್ತು ಸೀರೆ ಉತ್ಸಾಹಿಗಳಿಗೆ ನೇಕಾರರೊಂದಿಗೆ ಸಂಪರ್ಕ ಸಾಧಿಸಲು ಇದು ಒಂದು ವೇದಿಕೆಯಾಗಿದೆ. ವಿಮೋರ್ ಕೇವಲ ಕೈಮಗ್ಗದ ಬಗ್ಗೆ ಮಾತ್ರವಲ್ಲ,

ಈ ವಲಯವನ್ನು ಬೆಂಬಲಿಸುವ ಆರ್ಥಿಕ ಪರಿಣಾಮಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದೆ.

CITY HUB NEWS

9986904016

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.

Create a free website or blog at WordPress.com.

Up ↑

%d bloggers like this: